Tuesday 14 May 2019

--- ಗುರುರಾಯ -------

---  ಗುರುರಾಯ -------

ಶ್ರೀ ಹರಿ ದೂತ ಗುರುರಾಯ 
ಹನುಮನ ಕಂಡ ಭೂಪ ಗುರುರಾಯ 

ಪ್ರಲ್ಹಾದನ ನಿಜರೂಪ ಗುರುರಾಯ 
ವ್ಯಾಸನ ಮರುರೂಪ ಗುರುರಾಯ 

ಧರ್ಮವ ರಕ್ಷಿಪ ಗುರುರಾಯ 
ಬೇಡಿದ ಕೊಡುವ ಕಲ್ಪವೃಕ್ಷ ಗುರುರಾಯ 

ಸಾರುವ ಹರಿನಾಮ ಗುರುರಾಯ 
ಜನರಿಗೆ ದಾರಿದೀಪ ಗುರುರಾಯ 

ಸ್ಪೂರ್ತಿ:
(ವೆಮೋ)
ರಾಘು 

-----: ರಾಮನಾಮಹನುಮ :-----

           -----: ರಾಮನಾಮಹನುಮ  :----- 

ಹನುಮನ ಕೃಪೆಯೊಂದಿದ್ದರೆ ಸಾಕು ಹರಿಯ ಕಾಣಲು 
ಹನುಮನ ಜಪವೊಂದಿದ್ದರೆ ಸಾಕು ರಾಮನ ನೆನೆಯಲು 
ಹನುಮನ ಮನವೊಂದಿದ್ದರೆ ಸಾಕು ಹರಿಯನರಿಯಲು  
ದಾಸರ ಪದವೊಂದಿದ್ದರೆ ಸಾಕು ಹರಿಯ ಹೊಗಳಲು 
ದಾಸರ ಕೃತಿಯೊಂದಿದ್ದರೆ ಸಾಕು ಭವ ಬಂಧನವ ತೊರೆಯಲು
ಗುರುವಿನ ದಯೆಯೊಂದಿದ್ದರೆ ಸಾಕು ಹರಿದಾಸನಾಗಲು 
ರಾಯರ ರಕ್ಷೆಯೊಂದಿದ್ದರೆ ಸಾಕು ಸಜ್ಜನರ ಪೋರೆಯಲು 
ರಾಮನ ನಾಮವೊಂದಿದ್ದರೆ ಸಾಕು ಮೋಕ್ಷ ದೊರಕಲು 
 

ರಾಘು
ಸ್ಪೂರ್ತಿ: ಹಭೀಮ (ವೆಮೋ)  

ನನ್ನ ಹಂಬಲ




"ನಿನ್ನ ಕಣ್ಣಿನ ನೋಟದ ರಂಗೋಲಿ 
ನನ್ನ ಮನದ ಅಂಗಳದಲಿ ಚಿತ್ತಾರವಾದಾಗ
ನಿನ್ನ ನಗುವಿನ ವಿಧ ವಿಧದ ಬಣ್ಣಗಳು 
ನನ್ನ ಭಾವದ ತೋಟದಲಿ ಅರಳಿದಾಗ 

ಒಂದು ಬಾರಿ ನನ್ನ ಒಲುಮೆಯ ಸ್ವಿಕರಿಸು 
ಪ್ರೀತಿ ಕೊಡುವೆನು ಹೃದಯವ ಕಾದಿರಿಸು 
ಬೆಂದಿಹೇನು ಕನಸುಗಳ ಮಂದ  ಬೆಂಕಿಯಲಿ 
ಪೋಣಿಸು ಭಾವನೆಯ ಮಣಿಗಳ ಕರುಣೆಯಲಿ" 

 "ಒಮ್ಮೆಯಾದರೂ ಕರುಣೆ ತೋರಿಸು ಈ ಹುಂಬ ಹೃದಯದ ಭಾವನೆಗೆ ,
ಅದೇಕೋ ಈ ನನ್ನ ಮನವು ಕೊರುತಿದೆ, ಕಾಯುತಿದೆ ನಿನ್ನ ಸಮ್ಮತಿಗೆ "

ಜೀವ ಇರುವವರೆಗೂ ನಾ ಸಹಿಸಬಲ್ಲೆ ನಿನ್ನ ತಿರಸ್ಕೃತಿಯ
ಜೀವ ತ್ಯೆಜಿಸುವ ಮುನ್ನ ಒಮ್ಮೆ ನೀಡು ನಿನ್ನ ಸ್ವಿಕೃತಿಯ
ನಿನ್ನ ಮೇಲಿನ ಪ್ರೀತಿಗೆ ಕೊಡು ನಿನ್ನ ಬೆಂಬಲ
ಇದೆ ನನ್ನ ಪುಟ್ಟ ಹೃದಯದ ಕರಗದ ಹಂಬಲ"


ರಾಗಾ 
ಸ್ಪೂರ್ತಿ : ಕಠಿಣ ಕವಿ 

ಮಾಯೆ


ಯಾರು ಬಲ್ಲರು ಹೆಣ್ಣಿನ ಮಾಯೆ 
ನಾನರಿಯದೆ ಹೋದೆ ಅದರ ಛಾಯೆ 

ಯಾರು ಬಲ್ಲರು ಹೆಣ್ಣಿನ ಮನಸು 
ಅದೊಂದು ಕಂಡರೂ ಕಾಣದ ಕನಸು 

ಯಾರು ಬಲ್ಲರು ಹೆಣ್ಣಿನ ಮೌನ 
ಅದು ಕೋಗಿಲೆ ಹಾಡಲಾರದ ಗಾನ  

ಯಾರು ಬಲ್ಲರು ಹೆಣ್ಣಿನ ಗುಣ 
ಅದು ಗುರಿ ಮುಟ್ಟದ ಬಾಣ 

ಯಾರು ಬಲ್ಲರು ಹೆಣ್ಣಿನ ನೋಟ 
ಎಲ್ಲರಿಗೂ ಕಾಡುವ ವಿಚಿತ್ರ ಕಾಟ 

ರಾಘವ... 
ಸ್ಪೂರ್ತಿ :-- ಕಠಿಣ ಕವಿ (ವೆಮೋ)

ಪ್ರೀತಿಯ ಪ್ರಿಯಾ



ಬರುತಿರಲಿ ಪ್ರತಿ ವರುಷ ನಿನ್ನ ಜನ್ಮ ದಿನ 
ತರುತಿರಲಿ ಹೊಸ ನಿಮಿಷವ  ಅನು ದಿನ 

ಬೆಳಗಲಿ ಬಾಳಿನ ದೀಪ ಪ್ರತಿ ದಿನ
ನಿನಗಾಗಲಿ ಸಂತೋಷದ ಶುಭ ದಿನ

ತುಂಬಿರಲಿ ಬಾಳು ಬೆಳದಿಂಗಳ ಬೆಳಕಲಿ  
ಮಿನುಗುತಿರು ಪೂರ್ಣ ಚಂದ್ರನ ಹೊಳಪಲಿ  
 
ನಗುವಿರಲಿ ಪ್ರತಿ ಕ್ಷಣ ನಿನ್ನ ಮೊಗದಲಿ  
ದೇವರ ಕೋರುವೆ ನಿನ್ನನ್ನೇ ಪ್ರತಿ ಜನ್ಮದಲಿ 


ನಿನ್ನ ಪ್ರೀತಿಯ 
ರಾಗಾ  

ಕನ್ನಡ ರಾಜ್ಯೋತ್ಸವ


ನಮ್ಮೆಲ್ಲರ  ನಾಡು ಕನ್ನಡ ನಾಡು 
ಎಲ್ಲೆಲ್ಲೂ ತುಂಬಿದೆ ಗಂಧದ ಬಿಡು 

ಕನ್ನಡ ನುಡಿಗಳು ಕೇಳಲು ಇಂಪು 
ಜಗದೊಳು ಸೂಸಿದೆ ಗಂಧದ ಕಂಪು 

ಕನ್ನಡ ತಾಯಿಗೆ ಕೋಟಿ ಕೋಟಿ ನಮನ 
ಕನ್ನಡವೆಂದರೆ ಕುಣಿವುದು ನಮ್ಮ ಮನ 

ಸಂಸ್ಕೃತಿ ಕಲೆಗಳ ನೆಲೆ ನಾಡು 
ಸಹ್ಯಾದ್ರಿ ಬೆಟ್ಟಗಳ ಹಸಿರಿನ ಬಿಡು 

ಚಿಮ್ಮಿದೆ ತ್ಯಾಗ ಬಲಿದಾನಗಳ ರಕ್ತದ ಸೆಲೆ 
ಇಲ್ಲಿದೆ ಪುಣ್ಯ ಕೋಟಿಯ ಇತಿಹಾಸದ ನೆಲೆ 

ಒಂದೇ ನಾಡು ಹಲವು ಜಗತ್ತಿನ ಮುನ್ನುಡಿ 
ಕನ್ನಡಿಗರ ಭಾವೈಕ್ಯತೆಗೆ ದೊರಕಿದ ಕನ್ನಡಿ 

ರಾಗ 
ಸ್ಪೂರ್ತಿ : ಕಠಿಣ ಕವಿ 

short poem

ನೀ ಬಂದೆ ಬಾಳಿನ ಬೆಳಕಾಗಿ 
ತಂದೆ ಹರುಷವ ಭಾವನೆಗಳಾಗಿ 

ನಿಂದೆ ಮನದಲಿ ಉಸಿರಾಗಿ 
ನೊಂದೆ ನಿನ್ನಿಂದ ದೂರಾಗಿ 

ಕೇಳುವೆ ನಿನ್ನ ಮಾತುಗಳ ಮೂಕನಾಗಿ 
ಗುನುಗುತಿರು ಕಿವಿಯಲಿ ಹಕ್ಕಿಯ ಕಲರವವಾಗಿ 

ನೀ ಬರುವೆ ನನ್ನ ಕವನದ ಸ್ಪೂರ್ತಿಯಾಗಿ 
ನಾ ಬರುವೆ ನಿನ್ನ ಕನಸಲಿ ನೆನಪಾಗಿ 

raghava